ವಿಶ್ವ ಜೈವಿಕ ಇಂಧನ ದಿನಾಚರಣೆ ದಿನಾಂಕ10.08.2022 ಬುಧವಾರ ಬೆಳಿಗ್ಗೆ 11.30 ಕ್ಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
- Manjunath Uttarkar
- Aug 10, 2022
- 1 min read

ಜಿಲ್ಲಾ ಜೈವಿಕ ಇಂಧನ ಸಂಶೋಧನ , ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ, ಅರಣ್ಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ ಗದಗ ವತಿಯಿಂದ ವಿಶ್ವ ಜೈವಿಕ ಇಂಧನ ದಿನಾಚರಣೆ ದಿನಾಂಕ:10.08.2022ರ ಬುಧವಾರ ಬೆಳಿಗ್ಗೆ 11.30 ಘಂಟೆಗೆ ಕಾರ್ಯಕ್ರಮವನ್ನು ಕಾಲೇಜಿನ ನ್ಯೂ ಸಿವಿಲ್ ಸೇಮಿನಾರ ಹಾಲಿನಲ್ಲಿ ಆಯೋಜಿಸಿದ್ದು. ಈ ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಮತಿ ಬಿ ಸುಶೀಲಾ, ಗೌರವಾನ್ವಿತ ಅತಿಥಿಗಳಾಗಿ ಪ್ರೊ. ಎಸ್ ಎಸ್ ಪಟ್ಟಣಶೆಟ್ಟಿ , ಆಡಳಿತ ಅಧಿಕಾರಿಗಳು ತೋಂಟದಾರ್ಯ ಮಠ, ಗದಗ, ಅತಿಥಿಗಳಾಗಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ( ಸಾಮಾಜೀಕ ಅರಣ್ಯ) ಶ್ರೀ ನಾಗಶೆಟ್ಟಿ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ( ಸಾಮಾಜೀಕ ಅರಣ್ಯ) ಶ್ರೀ ಹರೀಶ, ಸಾಮಾಜಿಕ ಹೋರಾಟಗಾರರು ಮತ್ತು ವಕೀಲರಾದ ಶ್ರೀ ರವಿಕಾಂತ ಅಂಗಡಿ,ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಂ ಅವಟಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿವರು. ಕಾಲೇಜಿನ ನನ್ನ ಸಹದ್ಯೋಗಿಗಳು ,ಎಲ್ಲ ವಿಭಾಗದ ಮುಖ್ಯಸ್ಥರು , ಭೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments