top of page
Search

Five Day Faculty Development Program (FDP) at Tontadarya College of Engineering, Gadag

ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ (FDP)


ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಜಿಎಸ್‍ಟಿ, ಕರ್ನಾಟಕ ಸರಕಾರ (VGST) ಇದರ ಪ್ರಾಯೋಜಕತ್ವದಲ್ಲಿ ಮತ್ತು ವಿದ್ಯುನಮಾನ ವಿಭಾಗ (E&C) ದ ಸಹಯೋಗಲ್ಲಿ 5 ದಿನಗಳ (ಜುಲೈ 25 ಮತ್ತು ಅಗಞ್ಟ 3-6 ರ ವರೆಗೆ) ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ (FDP) ಜರುಗಿತು. ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸಾಯನ್ಸ್‍ನ ಡಾ. ಅಶೋಕರಾವ್, ಡಾ. ಅರುಲಾಲನ್ ರಾಜನ್, ಬೆಂಗಳೂರಿನ ಎನ್.ಟಿ.ಟಿ ಯ ವಿಜ್ಞಾನಿಗಳಾದ ಡಾ. ಮಹಮ್ಮದ್ ಇಮ್ರಾನ್, ತೊಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಡಾ. ಮಾಲಿನಿ ಸುವರ್ಣ, ಡಾ. ಸುಜಾತ ಭಾವಿಕಟ್ಟಿ ಉಪನ್ಯಾಸವನ್ನು ನೀಡಿದರು. ಶಿವಮೊಗ್ಗ. ಗಂಗಾವತಿ, ಹುಬ್ಬಳ್ಳಿ, ಧಾರವಾಡ, ಗದಗ, ಲಕ್ಷ್ಮೇಶ್ವರ ಸೇರಿದಂತೆ ಹಲವಾರು ಭಾಗದ ಇಂಜನಿಯರಿಂಗ್ ಮತ್ತು ಡಿಪ್ಲೋಮಾ ಮತ್ತು ಪದವಿ ಕಾಲೇಜಿನ ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಂ.ಅವಟಿ, ವಿದ್ಯುನ್ಮಾನ ಮತ್ತು ವಿದ್ಯುಶಕ್ತಿ (E&E) ವಿಭಾಗದ ಮುಖ್ಯಸ್ಥರಾದ ಡಾ. ಈರಣ್ಣ ಕೊರಚಗಾಂವ್, ಗಣಕಯಂತ್ರ ವಿಭಾಗದ (CSE)ಮುಖ್ಯಸ್ಥರಾದ ಪ್ರೊ. ವಿಜಯಕುಮಾರ ಮಾಲಗಿತ್ತಿ, ಮೆಕ್ಯಾನಿಕಲ್ ವಿಭಾಗದ (Mechanical) ಮುಖ್ಯಸ್ಥರಾದ ಡಾ. ಡಿ.ಎಮ್. ಗೌಡರ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ವಿಧ್ಯಾರ್ಥಿನಿಯಾದ ಕು. ಛಾಯಾ ಪ್ರಾರ್ಥನೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಾದ ಡಾ. ಸುಜಾತಾ ಭಾವಿಕಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಶೈಲಜಾ ಬಾತಾಕಾನಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಸುವರ್ಣಾ ಮಾಲಿನಿ ಕಾರ್ಯಕ್ರಮದ ಉದ್ದೇಶ ಮತ್ತು ಅಗತ್ಯತೆಯನ್ನು ತಿಳಿಸಿಕೊಟ್ಟರು. ಉಪನ್ಯಾಸ ನೀಡಿದ ಡಾ. ಅಶೋಕ ರಾವ್ “Mathematical Foundation for Machine Learning” ಕುರಿತು ಅದರ ಸಾಧ್ಯತೆಗಳನ್ನು ಕುರಿತು ಮತ್ತು ಮುಂಬರುವ ದಿನಗಳಲ್ಲಿ ಈ ವಿಷಯದಲ್ಲಿ ಆಗಬಹುದಾದ ಬೆಳವಣಿಗೆಗೆಳನ್ನು ಸಂಕ್ಷೀಪ್ತವಾಗಿ ವಿವರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಂ.ಎಂ.ಅವಟಿ ಅವರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಈ ಉಪನ್ಯಾಸದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ವಿದ್ಯುನ್ಮಾನ ವಿಭಾಗದ ಎಲ್ಲ ಸಿಬ್ಬಂದಿಗಳು ಹಾಜರಿದ್ದರು. ಪ್ರೊ. ಆದೇಶ ಅಂಗಡಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಡಾ. ರಶ್ಮಿ ಅಂಗಡಿ ನಿರೂಪಿಸಿದರು.

96 views0 comments

Comments

Rated 0 out of 5 stars.
No ratings yet

Add a rating
bottom of page